Mangaluru | ಮಂಗಳೂರಲ್ಲಿ ನಿಲ್ಲದ ಕಡಲ್ಕೊರೆತ..! | Public TV

2022-07-16 9

Mangaluru | ಮಂಗಳೂರಲ್ಲಿ ನಿಲ್ಲದ ಕಡಲ್ಕೊರೆತ..! | Public TV

#publictv #mangaluru #sea

ಮಂಗಳೂರಿನ ಕಡಲ ತೀರಗಳಾದ ಉಳ್ಳಾಲ, ಬಟ್ಟಪ್ಪಾಡಿ, ಉಚ್ಚಿಲ, ಸೋಮೇಶ್ವರ, ಪಣಂಬೂರು, ಸುರತ್ಕಲ್ ಸೇರಿದಂತೆ ಕರಾವಳಿಯ ತೀರದುದ್ದಕ್ಕೂ ಕಡಲ್ಕೊರೆತ ಹೆಚ್ಚಾಗ್ತಿದೆ. ಮಂಗಳೂರಿನ ಪಣಂಬೂರಿನ ಮೀನಕಳಿಯ ಕಡಲ ತೀರದಲ್ಲಿ ಕಡಲಬ್ಬರಕ್ಕೆ ಕಾಂಕ್ರೀಟ್ ರಸ್ತೆಯೇ ಸಮುದ್ರ ಪಾಲಾಗಿದೆ. ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದು ಮೂರು ಮನೆಗಳನ್ನು ಸಮುದ್ರ ರಾಜ ನುಂಗಿದ್ದಾನೆ. ನೋಡುತ್ತಿದ್ದಂತೆ ಮನೆಗಳು ಕುಸಿದು ಸಮುದ್ರ ಪಾಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರಾಣ ಹಾನಿ ಆಗಿಲ್ಲ.. ಕಡಲ್ಕೊರೆತದಿಂದ ಮೀನುಗಾರರು ಆತಂಕಕ್ಕೀಡಾಗಿದ್ದಾರೆ.

Watch Live Streaming On http://www.publictv.in/live